ಧಾರವಾಡ ಸಾಹಿತ್ಯ ಸಂಭ್ರಮ
                       ಸಂಸ್ಕೃತಿ ಸಂವಾದ
20, 21 ಮತ್ತು 22 ನೇ ಜನೇವರಿ - 2017
ಸ್ಥಳ : ಸುವರ್ಣ ಮಹೋತ್ಸವ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 
 
   

 

   
ಧಾರವಾಡ ಸಾಹಿತ್ಯ ಸಂಭ್ರಮ-೨೦೧೭ಕ್ಕೆ ಸ್ವಾಗತ

ಸಂಸ್ಕೃತಿ ಸಂವಾದ
   
   

ಧಾರವಾಡ ಸಾಹಿತ್ಯ ಸಂಭ್ರಮ ಈ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಅತ್ಯಂತ ಮಹತ್ವದ ಸಾಂಸ್ಕೃತಿಕ ಉತ್ಸವಕೇಂದ್ರವಾಗಿ ಜನಮನ್ನಣೆ ಗಳಿಸಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷವೂ ಹೊಸದನ್ನು, ಮಹತ್ವವಾದದ್ದನ್ನು ಕೊಡಬೇಕಂಬ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಕರ್ನಾಟಕದ ಒಳ-ಹೊರಗಿನ ಅನೇಕ ಸಾಹಿತಿಮಿತ್ರರು ಇದನ್ನು ಬೆಂಬಲಿಸಿ ಯಶಸ್ವಿಗೊಳಿಸಲು ಸಹಕರಿಸಿದ್ದಾರೆ ಎನ್ನುವದು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ.

ಧಾರವಾಡ ಸಾಹಿತ್ಯ ಸಂಭ್ರಮದ ೫ನೆ ಆವೃತ್ತಿ ೨೦೧೭ರ ಜನೇವರಿ ೨೦-೨೧-೨೨ರಂದು ಮೂರು ದಿನ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಜಾವಾಣಿ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಇತರ ಸಂಘ-ಸಂಸ್ಥೆಗಳು ಸಂಭ್ರಮಕ್ಕೆ ಕೈಗೂಡಿಸಲಿದ್ದಾರೆ.
ಈ ವರ್ಷದ ಸಂಭ್ರಮವನ್ನು ಕವಿ ಕೆ.ಎಸ್.ನಿಸಾರ್ ಅಹ್ಮದ್ ಅವರು ಉದ್ಘಾಟಿಸಲಿದ್ದಾರೆ. ವಿಮರ್ಶಕ ಜಿ.ಎಚ್.ನಾಯಕ ಅವರು ಆಶಯಭಾಷಣ ಮಾಡುತ್ತಾರೆ. ಸಮಾರೋಪ ಭಾಷಣ ಗುರುಲಿಂಗ ಕಾಪಸೆ ಅವರದು.

ಪ್ರಸಿದ್ಧ ಪುರಾಣಶಾಸ್ತ್ರಜ್ಞ ಮುಂಬಯಿಯ ದೇವದತ್ತ ಪಟ್ಟನಾಯಕ ಅವರು ಈ ಸಲದ ಸಂಭ್ರಮದ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮತೀಂದ್ರ ನಾಡಿಗ, ಸುಂದರ ಸಾರುಕ್ಕೈ, ಲಕ್ಷ್ಮೀಶ ತೋಳ್ಪಾಡಿ, ವೈದೇಹಿ, ನಾ.ಡಿಸೋಜಾ, ಮಲ್ಲಿಕಾ ಘಂಟಿ, ಕೆ.ಸತ್ಯನಾರಾಯಣ, ನಟರಾಜ ಹುಳಿಯಾರ, ಬಸವರಾಜ ಬೊಮ್ಮಾಯಿ, ರಮ್‌ಜಾನ ದರ್ಗಾ, ಯೋಗರಾಜ ಭಟ್, ಚಂದ್ರಶೇಖರ ಪಾಟೀಲ, ವೀಣಾ ಬನ್ನಂಜೆ, ಎಂ.ಎಸ್.ಆಶಾದೇವಿ, ಓ.ಎಲ್.ನಾಗಭೂಷಣಸ್ವಾಮಿ ಮೊದಲಾದ ಲೇಖಕರು ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಚಿತ್ರನಟ ರಮೇಶ ಅರವಿಂದ ಅವರು ಸಂವಾದದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಗೋಷ್ಠಿಯಲ್ಲಿ ಪಾಲುಗೊಳ್ಳುವವರ ಜೊತೆಗೆ ಸುಮಾರು ೨೦೦ ಜನ ಸಾಹಿತಿಗಳು ಆಮಂತ್ರಿತರಾಗಿ ಬರಲಿದ್ದಾರೆ.

ಈ ವರ್ಷ ಸಾಹಿತ್ಯ ಸಂಭ್ರಮ ಯಾವುದೇ ಒಂದು ಪಂಥ-ಸಿದ್ಧಾಂತಕ್ಕೆ ಸೀಮಿತವಾದದ್ದಲ್ಲ. ಇಲ್ಲಿ ಎಲ್ಲ ರೀತಿಯ ವಿಚಾರಗಳ ಅಭಿವ್ಯಕ್ತಿಗೂ ಅವಕಾಶವಿದೆ. ಬೇರೆ-ಬೇರೆ ಸಿದ್ಧಾಂತಗಳ ಜನ ಇಲ್ಲಿ ಸೇರಿ ಮುಕ್ತ ಪರಿಸರದಲ್ಲಿ ಮುಖ್ಯ ವಿಷಯಗಳನ್ನು ಚರ್ಚಿಸುತ್ತಾರೆ. ವಿವಿಧ ಸಿದ್ಧಾಂತಗಳ ನಡುವೆ ಸಂವಾದ ನಡೆಯಬೇಕೆಂಬುದು ಸಂಭ್ರಮದ ಉದ್ದೇಶವಾಗಿದೆ. ರಾಷ್ರ್ಟೀಯ ಜಲನೀತಿ ಮತ್ತು ಎಡ-ಬಲಗಳ ನಡುವೆ ಎಂಬ ರಾಷ್ಟ್ರೀಯ ಜ್ವಲಂತ ಸಮಸ್ಯೆಗಳ ಬಗೆಗೆ ಎರಡು ಗೋಷ್ಠಿಗಳು ಇರಲಿವೆ. ಜೊತೆಗೆ, ಸಾಹಿತ್ಯ ಸದಾ ಜನಪರವೆ?, ಭಕ್ತಿಪರಂಪರೆ ಮತ್ತು ಕನ್ನಡ ಕಾವ್ಯ, ವಚನ ಸಾಹಿತ್ಯ ಮತ್ತು ಜಾತಿನಿರಸನ, ಸಾಹಿತ್ಯ ಮತ್ತು ತತ್ವಜ್ಞಾನ ಮೊದಲಾದ ಚರ್ಚಾಗೋಷ್ಠಿಗಳು ನಡೆಯಲಿವೆ. ಸಾಹಿತಿಗಳು ಬರೆದ ಪತ್ರಗಳ ಓದಿನ ಒಂದು ಗೋಷ್ಠಿಯೂ ಇದೆ. ಚಿತ್ರಕಲೆಯನ್ನು ಕುರಿತು ಒಂದು ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಜಿ.ಪಿ.ರಾಜರತ್ನಂ ಮತ್ತು ವಿ.ಜಿ.ಭಟ್ಟರ ಕವಿತೆಗಳ ಓದು, ಆಯ್ದ ಕನ್ನಡ ಕವಿತೆಗಳನ್ನು ಆಧರಿಸಿದ ವಿಡಿಯೊ, ಗೊಂದಲಿಗರ ಹಾಡಿನ ಪ್ರಾತ್ಯಕ್ಷಿಕೆ, ಸಾಹಿತ್ಯಿಕ ಪ್ರಸಂಗಗಳ ನಿರೂಪಣೆ ಇರಲಿವೆ.

ಪ್ರತಿನಿಧಿಗಳ ನೋಂದಣಿ ಶುಲ್ಕವನ್ನು ಕಳೆದ ವರ್ಷದಂತೆ ೭೫೦ ರೂಪಾಯಿಗಳಿಗೆ ನಿಗದಿಗೊಳಿಸಲಾಗಿದೆ. ಆನ್‌ಲೈನ್ ನೋಂದಣಿ ಡಿಸೆಂಬರ್ ೨೪ರ ಬೆಳ್ಳಿಗ್ಗೆ ೧೦ಗಂಟೆಯಿಂದ ಆರಂಭವಾಗಲಿದೆ. www.dharwadsahityasambhrama.com ಜಾಲತಾಣದಿಂದ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ೩೦೦ ಪ್ರತಿನಿಧಿಗಳಿಗೆ ಸೀಮಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚು ಜನರು ಭಾಗವಹಿಸಲು ಆಸಕ್ತಿ ತೋರಿಸುತ್ತಿದ್ದಾರಾದರೂ, ನಮ್ಮ ಸಭಾಭವನದ ಆಸನಮಿತಿಯಿಂದಾಗಿ, ಎಲ್ಲರನ್ನೂ ಸಮಾಧಾನಪಡಿಸಲು ಆಗುತ್ತಿಲ್ಲ. ಸಭೆ ಬಹಳ ದೊಡ್ಡದಾದರೆ ಚರ್ಚೆ-ಸಂವಾದಗಳು ಸಾಧ್ಯವಾಗುವುದಿಲ್ಲ.

ಸಭಾಭವನದಲ್ಲಿ ಪ್ರವೇಶ ದೊರೆಯದವರಿಗಾಗಿ ಹೊರಗೆ ಎಲ್‌ಇಡಿ ಪರದೆಯನ್ನು ಅಳವಡಿಸಿ ಎಲ್ಲ ಕಾರ್ಯಕ್ರಮಗಳನ್ನು ತೋರಿಸಲಾಗುವುದು. ಇಲ್ಲಿ ೪೦೦ ಜನರಿಗಾಗಿ ಆಸನ ವ್ಯವಸ್ಥೆ ಇರುತ್ತದೆ. ಅಲ್ಲಿಯ ಪರದೆ ಮತ್ತು ಧ್ವನಿವ್ಯವಸ್ಥೆ ಬಹಳ ಒಳ್ಳೆಯ ಗುಣಮಟ್ಟದ್ದಾಗಿರುವದರಿಂದ ಚಿತ್ರ ಮತ್ತು ಧ್ವನಿ ಬಹಳ ಸ್ಪಷ್ಟವಾಗಿರುತ್ತವೆ. ಇಲ್ಲಿ ಪ್ರವೇಶ ಉಚಿತ. ಕಳೆದ ವರ್ಷಗಳಂತೆ ಈ ವರ್ಷವೂ ಪುಸ್ತಕಮಳಿಗೆಗಳು ಇರುತ್ತವೆ. ಜೊತೆಗೆ ಪ್ರಸಿದ್ದ ಸಾಹಿತಿಗಳು ಬರೆದ ಪತ್ರಗಳ ಪ್ರದರ್ಶನವೂ ಇರುತ್ತದೆ. ಸಂಭ್ರಮದ ಎಲ್ಲ ಕಾರ್ಯಕ್ರಮಗಳನ್ನು www.vividlipi.com ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿ ಕನ್ನಡಿಗರು ನೋಡಬಹುದು.

 

Quick Links

 

Design & Development By
 
M/s Weblogix
webblogix@gmail.com
 Contact For:
 Website Design
 Software Development
 Softwares / Web Testing
 Technical Consultancy
Logic works @ weblogix